June 6, 2012

Jackie - Shiva antha hoguthidde : Lyrics

Movie : Jackie
Lyricist : Yogaraj Bhat
Lyrics : ಶಿವ ಅಂತ ಹೋಗುತ್ತಿದ್ದೆ

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ,
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ,
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ,
ನೀ ಕಂಡೆ ಸೈಡಿನಲಿ...

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ,
ಕಂಬ್ಳಿಹುಳ ಬಿಟ್ಟಂಗಾಯ್ತು ಹಾರ್ಟಿನಲಿ,
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ,
ನಿ ಕುಂತಾಗ ಬೈಕಿನಲಿ...

ಟಾಪು ಗೇರು ಹಾಕಂಗಿಲ್ಲ,
ಸುಮ್ನೆ ಬ್ರೇಕು ಹೊಡ್ಯಂಗಿಲ್ಲ,
ಟಾಪು ಗೇರು ಹಾಕಂಗಿಲ್ಲ, ಸುಮ್ನೆ ಬ್ರೇಕು ಹೊಡ್ಯಂಗಿಲ್ಲ,
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು,

ಥೂ ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು...

ಒಂದು ಮಾತು ಕೇಳಲಿಲ್ಲ,
ಒಂದು ಮಾತು ಕೇಳಲಿಲ್ಲ, ಹಿಂದೆ ಮುಂದೆ ನೋಡಲಿಲ್ಲ,
ನನ್ನ ಎದೆ ಸೈಟನ್ನು ಕೊಂಡುಕೊಂಡು,
ತಡಮಾಡದೆ ಪಾಯವ ತೊಡಿಬಿಟ್ಳು...


ಹೂವಿನಂತ ಹುಡ್ಗ ನಾನು ತುಂಬ ಮೃದು,
ಹೂವಿನಂತ ಹುಡ್ಗ ನಾನು ತುಂಬ ಮೃದು,
ಹೆಣ್ಮಕ್ಳೆ ಸ್ಟ್ರಾಂಗು ಗುರು,...

ರಾಂಗು ಗುರು, ರಾಂಗು ಗುರು, ರಾಂಗು ಗುರು, ರಾಂಗು ಗುರು...

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ,
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ,
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ,
ನೀ ಕಂಡೆ ಸೈಡಿನಲಿ...

ಉಣ್ಣಲಿಲ್ಲ, ತಿನ್ನಲಿಲ್ಲ,
ಮಟ ಮಟ ಮಧ್ಯಾಹ್ನವೇ,
ಉಣ್ಣಲಿಲ್ಲ ತಿನ್ನಲಿಲ್ಲ, ಮಟ ಮಟ ಮಧ್ಯಾಹ್ನ,
ಕುಂತುಬಿಟ್ಳು ಹಿಂದುಗಡೆ ಸೀಟಿನಲಿ,
ನಾ ಬಡ್ಕೋಬೇಕು ನನ್ನದೆ ಬೂಟಿನಲಿ...

ಒಂದು ಕೇಜಿ ಅಕ್ಕಿ ರೇಟು,
ಒಂದು ಕೇಜಿ ಅಕ್ಕಿ ರೇಟು ಮೂವತ್ರೂಪಾಯಿ ಆಗೆಹೋಯ್ತು,
ಈಸಿಯಾಗಿ ಹೇಗೆ ನಾನು ಪ್ರೀತಿಸಲಿ,
ಅದರಲ್ಲೂ ಮೊದಲನೆ ಭೇಟಿಯಲಿ...

ರೇಷನ್ ಕಾರ್ಡು ಬೇಕೇಬೇಕು ಪ್ರೀತಿಸಲು,
ರೇಷನ್ ಕಾರ್ಡು ಬೇಕೇಬೇಕು ಪ್ರೀತಿಸಲು,
ಸಂಸಾರ ಬೇಕ ಗುರು,

ಬೇಕು ಗುರು, ಬೇಕು ಗುರು, ಬೇಕು ಗುರು, ಬೇಕು ಗುರು...

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ,
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ,
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ,
ನೀ ಕಂಡೆ ಸೈಡಿನಲಿ...

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ,
ಕಂಬ್ಳಿಹುಳ ಬಿಟ್ಟಂಗಾಯ್ತು ಹಾರ್ಟಿನಲಿ,
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ,
ನಿ ಕುಂತಾಗ ಬೈಕಿನಲಿ...

No comments:

Post a Comment